ಯಾಕಾರ ಬಂತೋ ಆ ೪೭ರ ಸ್ವಾತಂತ್ರ್ಯ !
ಯಾಕಾರ ಬಂತೋ ಆ ೪೭ರ ಸ್ವಾತಂತ್ರ್ಯ !
ಯಾಕಾರ ಬಂತೋ ಹೆಂಗಾರ ಬಂತೋ l
ಆ ೪೭ ರ ಸ್ವಾತಂತ್ರ್ಯ …. ll
ಅರ್ಹ ಆಸಕ್ತ ಯುವಕರ ಕೈಗೆ ಕೆಲಸ ಕೊಟ್ಟು
ಬಡತನ ಆಲಸ್ಯ ದಾರಿದ್ರ್ಯಾವನ್ನಾಚೆ ಅಟ್ಟಿತೇ ?
ಆ ೪೭ ರ ಸ್ವಾತಂತ್ರ್ಯ …
ಅರಾಜಕತೆ ಭ್ರಷ್ಟಾಚಾರ ಲಂಚಗುಳಿತನದ ನಡುವೆ
ಬಲಾಢ್ಯ ಬಲಹೀನರ ನಡುವೆ ಕಂದಕ ಅಳಿಸಿತೇ ?
ಆ ೪೭ ರ ಸ್ವಾತಂತ್ರ್ಯ …
ಎಲ್ಲೋ ಕಳೆದು ಹೋಗಿರುವ ಸೃಜನಶೀಲ
ಮನಸುಗಳಿಗೆ ಮತ್ತೆ ಹುರುಪು ತುಂಬಬಲ್ಲುದೇ ?
ಆ ೪೭ ರ ಸ್ವಾತಂತ್ರ್ಯ …
ಪರರಿಂದ ಪಡೆದ ಸ್ವಾತಂತ್ರ್ಯ ಇಂದು ಗಣತಂತ್ರವಾಗಿ
ಜನತೆ ಕಂಡ ಆಶೋತ್ತರ ಈಡೇರಿಸಲು ಶಕ್ತವಾದೀತೇ?
ಆ 47ನೇ ಸ್ವಾತಂತ್ರ್ಯ …
ಅಂದು ದೇಶಭಕ್ತರು ತೆತ್ತ ನೆತ್ತರಿಗೆ ಬೆಲೆ ಎಂಬಂತೆ
ದಗಕೋರ ತಲೆ ಹಿಡುಕ ಅಡ್ಕಸ್ಬಿಗಳ ಪಾಲಾಯಿತೇ ?
ಆ 47ರ ಸ್ವಾತಂತ್ರ್ಯ …
Lyric by Nagaraj Ittigappa
( ವಿಭಜಿತ ಭಾರತದಲ್ಲಿ ನಾಟಕದ ದೃಶ್ಯ ೦೮ ರಿಂದ )
Discover more from ZorbaBooks
Subscribe to get the latest posts sent to your email.